ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದ ಒಂದನೇ ವಾರ್ಡಿನ ಗೋಕಾಕ ರಸ್ತೆಯ ಬದಿಯಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿ ಕಂಡು ಬರುತ್ತಿದೆ. ಪಾಶ್ಚಾಪೂರ ಗ್ರಾಮದಲ್ಲಿ ಸ್ನಾತಕೋತ್ತರ ಪದವಿ ತನಕ ಶಿಕ್ಷಣ ವ್ಯವಸ್ಥೆ ಹೊಂದಿದೆ.
ಜೊತೆಗೆ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾರ್ಥಿಗಳು ಸಾಗುವ ದಾರಿ ಕೂಡ ಈ ತ್ಯಾಜ್ಯದ ಪಕ್ಕದಲ್ಲಿಯೇ ಮತ್ತು ಉದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾಗಿದ್ದು ಮಾರುಕಟ್ಟೆಗೆ ಒಳಗಡೆ ಹೋಗಲು ಇದೇ ಮಾರ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಗುತ್ತಾರೆ, ಪಕ್ಕದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ, ಅಂಗನವಾಡಿ, ಗೋಕಾಕ ಸಾಗುವ ಮುಖ್ಯ ರಸ್ತೆ, ಎಟಿಎಂ ಹಾಗೂ ವ್ಯಾಪಾರ ಮಳಿಗೆಗಳು ಜೊತೆಗೆ ಖಾಸಗಿ ಬ್ಯಾಂಕ್ ಕೂಡ 50 ಮೀಟರ್ ಅಂತರದಲ್ಲಿ ಕಾಣುತ್ತೇವೆ.
ಆದರೆ ಇಷ್ಟೊಂದು ಜನರು ಸಂಪರ್ಕ ಹೊಂದುವ ರಸ್ತೆಯ ಬದಿಯಲ್ಲಿ ಅತೀ ಹೆಚ್ಚು ತ್ಯಾಜ್ಯ ಕಂಡು ಬರುತ್ತಿವೆ ಹಾಗೂ ತ್ಯಾಜ್ಯಗಳಿಂದ ಚರಂಡಿ ಕೂಡ ತುಂಬಿಕೊಳ್ಳುತ್ತಿದೆ. ಈ ಒಂದು ತ್ಯಾಜ್ಯದ ಸುತ್ತಲೂ ಜನರು ಈ ಪಕ್ಕದ ದಾರಿಯ ಮುಖಾಂತರ ಸಾಗುವಾಗ ದುರ್ವಾಸನೆ ಕಂಡು ಮೂಗು ಮುಚ್ಚಿಕೊಂಡು ಹೋಗುವ ಸಂಧರ್ಭಗಳು ಕೂಡ ಸಾರ್ವಜನಿಕರು ಕಾಣುತ್ತಿದ್ದಾರೆ. ಈ ಒಂದು ಸ್ಥಳವು ಅನಾರೋಗ್ಯಕ್ಕೆ ಅವಕಾಶ ಕೊಡುವ ಹಂತ ತಲುಪಿದೆ.

ಪರಿಸರ ಮಾಲಿನ್ಯದ ಸಮಸ್ಯೆ ಇದ್ದರೂ ಕೂಡ ಸಂಬಂಧಪಟ್ಟ ಇಲಾಖೆಗಳು ಯಾವುದೇ ಸೂಕ್ತ ಕ್ರಮ ಮತ್ತು ಪರಿಹಾರ ತೆಗೆದುಕೊಳ್ಳದೆ ಇರುವದು ಬೇಸರದ ಸಂಗತಿಯಾಗಿದೆ. ಅದಷ್ಟು ಬೇಗನೇ ಗ್ರಾಮ ಪಂಚಾಯತ ಈ ಒಂದು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬೇಕು ಎನ್ನುವದು ಜನರ ಅಭಿಪ್ರಾಯವಾಗಿದೆ.
ಅನಿಸಿಕೆ:
ಈ ಒಂದು ಪರಿಸರ ಮಾಲಿನ್ಯ ಸಮಸ್ಯೆಯು ಬಹುದಿನಗಳಿಂದ ನಾವೆಲ್ಲರೂ ಕಾಣುತ್ತಿದ್ದೇವೆ ಜೊತೆಗೆ ಈ ಒಂದು ಸಮಸ್ಯೆಯಿಂದ ಮಕ್ಕಳಿಗೆ ಹಾಗೂ ಸುತ್ತಲಿನ ಸಾರ್ವಜನಿಕರಿಗೆ ಅನಾರೋಗ್ಯ ಕಾಡುವ ಸಾಧ್ಯತೆ ಇರುತ್ತದೆ. ಅದಷ್ಟು ಗ್ರಾಮ ಪಂಚಾಯತ ಈ ಸಮಸ್ಯೆಗೆ ಉತ್ತಮ ಯೋಜನೆ ರೂಪಿಸಿ ಶಾಶ್ವತ ಪರಿಹಾರ ನೀಡಬೇಕು ಹಾಗೂ ಸಾರ್ವಜನಿಕರು ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ತ್ಯಾಜ್ಯದ ಜಾಗೃತರಾಗಿ ತ್ಯಾಜ್ಯ ವಿಲೇಮಾರಿ ಮಾಡಬೇಕು.
ಬಸವರಾಜ ಗುಬಚಿ, ಸಾಮಾಜಿಕ ಕಾರ್ಯಕರ್ತರು ಪಾಶ್ಚಾಪುರ

